ಲಾವಣಿ ರಾಗಿ
ಲಾಲಿಸಿ ಕೇಳೋ ಕೃಷಿಕನೆ ನೀನುರಾಗಿ ಬೆಳೆಯ ಚರಿತೆಯನು|
ಹುಟ್ಟಿದ ಮೇಲೆ ರಾಗಿಯ ತಿನ್ನದೆ ಸತ್ತರೆ
ಘೋರ ನರಕವದು ತಿಳಿಯಣ್ಣ||
ಚೇಳಿಗೆ,ಹಾವಿಗೆ ವಿಷವೇ ಅಮೃತವಣ್ಣ
ರಾಗಿಯು ನಮಗೆ ಸಂಜೀವಿನಿಯಂತೆ ತಿಳಿಯಣ್ಣ||
ರಾಗಿಯ ತಿಂದರೆ ದೇಹವು ಸದೃಢ ನೋಡಣ್ಣ
ಉಡುಪದು ಬೇಕು ದೇಹಕೆ ಶೋಭೆ ತಿಳಿಯಣ್ಣ||
ಕಾಲಿನ ರಕ್ಷ್ಣೆ ಮೆಟ್ಟಿನಿಂದ ತಿಳಿಯಣ್ಣ
ರೆಟ್ಟೆಗೆ ಶಕ್ತಿ,ತೋಳಿಗೆ ಶಕ್ತಿಗೆ ಬೇಕಿದೆ ರಾಗಿ ತಿಳಿಯಣ್ಣ||
ಹಣತೆಯ ಬೆಳಕು ಮನೆಗದು ಕಾಂತಿ ಅಲ್ವೇನಣ್ಣಾ
ರಾಗಿಯ ತಿಂದರೆ ಮನಕದು ಕಾಂತಿ,ದೇಹಕೆ ಶಾಂತಿ ತಿಳಿಯಣ್ಣಾ||
ಮಕ್ಕಳ ಶಕ್ತಿಗೆ ತಾಯಿಯ ಹಾಲು,ಗೋವಿನ ಹಾಲು ಬೇಕಣ್ಣ
ನಮ್ಮಯ ಶಕ್ತಿಗೆ ರಾಗಿಮುದ್ದೆ,ಸೊಪ್ಪಿನ ಬಸ್ಸಾರ್ ಬೇಕಣ್ಣಾ||
ಕಲ್ಲು ಚಂದದ ಶಿಲೆಯಾಗಲು ಶಿಲ್ಪಿಯ ಏಟದು ಬೇಕಣ್ಣ
ಕಲ್ಲುಗುಂಡಿಗೆ,ಕಭ್ಭಿಣ ತೋಳು,ಗರಗಸ ಮಾತು ಹೊರಡಲು ರಾಗಿಮುದ್ದೆ ತಿನ್ನಬೇಕಣ್ಣಾ||
ಕನ್ನಡಿ ಮುಂದೆ ನಿಂತರೆ ನೀನು ನರಪೇತಲನಂತೆ ಕಾಣುವೆ ಏಕಣ್ಣ
ಬಿಸ್ಕತ್,ಚಾಕ್ ಲೇಟ್, ತಿನ್ನುತ ರಾಗಿಯ ಮರೆತುದೆ ಕಾರಣ ತಿಳಿಯಣ್ಣಾ||
ಕನ್ನಡ ಕಣ್ಮಣಿ ಡಾ.ರಾಜ್ ಯಾರಿಗೆ ತಿಳಿಯದು ಹೇಳ್ರಣ್ಣಾ
ಅವರ ಮುದ್ದಿನ ಆಹಾರ ರಾಗಿಮುದ್ದೆ,ಬಸ್ಸಾರ್ ಕೇಳ್ರಣ್ಣಾ||
ಮಾಜಿ ಪ್ರಧಾನಿ ದೇವೇಗೌಡ್ರು ಯಾರಿಗೆ ತಿಳಿಯರು ಹೇಳ್ರಣ್ಣಾ
ಅವರ ಮುದ್ದಿನ ಆಹಾರ ಈ ರಾಗಿಮುದ್ದೆ ತಿಳಿಯಣ್ಣಾ||
ಆ ಗಟ್ಟಿಗಿತ್ತಿ ಒನಕೆ ಓಬವ್ವ ಗೊತ್ತಲ್ಲ
ಹಿಟ್ಟನು ತಿಂದು ಜಟ್ಟಿಯಂತೆ ಆ ಯವನರ ಕೊಂದ ದಿಟ್ಟೆಯಣ್ಣಾ||
ರಾಗಿಯ ಬಗ್ಗೆ ಎಷ್ಟು ಬರೆದರೂ ಸಾಲದಣ್ಣಾ
ಸೇವೆಯ ಮಾಡುವ ಮನ್ಸಿದ್ದರೆ ನಿನಗೆ ಈ ರಾಗಿಯ ತಿಂದು
ಈ ದೇಶದ ಆಸ್ತಿಯಾಗಣ್ಣಾ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ