ಜೈ ಕನ್ನಡ ಕೃಷಿಕರ ಸಂಜಾತೆ
ಜೈ ಕನ್ನಡ ಕೃಷಿಕರ ಸಂಜಾತೆಓ ಹೈಬ್ರೀಡ್ ರಾಗಿಗೆ ನಮಸ್ಕಾರ||
ಜೈ ನಿನ್ನಯ ಪೌಷ್ಠಿಕ ಗುಣಗಾತೆ
ಜಯಹೇ ನೀಡುವೆ ಇಳುವರಿ ಗರಿಷ್ಠತೆ
ಕೃಷಿಕರ ತಣಿಸುವ ಮಣಿಮಂಜರಿ ನೀ
ಕೆಂಪನೆ,ದುಂಡನೆ ಗುಣಮಣಿ ನೀ
ಶ್ರೀ ರಂಗನ,ಸಿದ್ದಲಿಂಗನ ತವರೂರಿನ ನಿಧಿ ನೀ||ಜೈ||
ಭೂದೇವಿಯ ಮಡಿಲಿನ ಹೆಮ್ಮೆಯು ನೀ
ಕೃಷಿಕರ ಜೀವವೆ ನಿನ್ನಯ ಹಿರಿಮೆ
ಹಸಿರಿನ ಪೈರಿನ ಸರತಿಯ ಸಾಲೇ......
ಭೂದೇವಿಗೆ ನೀ ತೊಡಿಸಿದ ಮುತ್ತಿನ ಮಾಲೇ....
ಇಂಡಾಫ್,ಎಂಆರ್,ಜಿಪಿಯು,ಸಂತತಿ
ಸಂಶೋಧಿತ ಸಾಲೇ||
ತಮಿಳರು,ತೆಲುಗರು,ಮರಾಠರು,ಕೇರಳಿ,ಬಂಗಾಳಿ
ಒಡೀಸ್ಸರು,ಸಿಕ್ಕರು,ಬೌದ್ದರು,ಜೈನರು,ಸಾಹೇಬರೂ,
ಪಾದ್ರಿ,ಪಠಾಣ್ ಇವರೆಲ್ಲರ ಮಿಗಿಲು
ಹಿಂದೂಕುಲ ಸಂಜಾತೇ
ಕನ್ನಡ ಕೃಷಿಕರ ಹೆಮ್ಮೆಯ
ಧಾತೇ||ಜೈ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ