ಶನಿವಾರ, ಆಗಸ್ಟ್ 23, 2014

ಕಾಣದ ಕೈಲಾಸಗಿರಿತಾಣದಲ್ಲಿ ಕಾಣಿಸು



ಕಾಣದ ಕೈಲಾಸಗಿರಿತಾಣದಲ್ಲಿ ಕಾಣಿಸು


ಕಾಣದ ಕೈಲಾಸಗಿರಿತಾಣದಲ್ಲಿ ಕಾಣಿಸು ವ್ಯಾಘ್ರಚರ್ಮಾಂಬರದಲ್ಲಿ ಕಾಣಯ್ಯ
ಕರಮುಗಿವೆ ಸರ್ಪಧಾರಿಯೇ||
ನಿನಗೆ ವಂದನೆ ನಮ್ಮ ಅಭಿವಂದನೆ,ಸ್ವಾಮಿ ಅಭಿವಂದನೆ,ದೇವಾ ಅಭಿವಂದನೆ||
ಬಂದಿಹೆ ನಾನು ಭವ್ಯ ಸ್ವರೂಪವ ತೋರಯ್ಯಾ
ಚಿನ್ಮನದೊಳು ಕನಿಕರಿಸಿ
ಹೇ ನಟರಾಜ ಎಲ್ಲಿ ನೋಡಿದರೂ ನಿನ್ನ ಪಾದ ಕಮಲಗಳೇ ಮಹೇಶ್ವರಾ||
ಬಹಿರಂಗದಿ ಕಾಣದೇ ಅಂತರಂಗದೊಳು ಎಲ್ಲಿರುವೆ
ದಯಾಮಯ ಈಶನೇ ಕೃಪೆ ತೋರು
ನಿನ್ನ ಸನ್ನಿಧಿಯೆ ನಮಗೆ ಅಷ್ಟನಿಧಿಯು

ಅದುವೆ ನಮಗೆ ಸಿದ್ಧಿಯು||

ಅಂಧಕಾರ ತುಂಬಿದ ಈ ಜಗದೊಳಗೆ


ಅಂಧಕಾರ ತುಂಬಿದ ಈ ಜಗದೊಳಗೆ ಅನ್ಯಾಯವೆ ತುಂಬಿದ
ಈ ಲೋಕದೊಳಗೆ ಹೇಗೆ ಬಾಳಲಿ ದೇವಾ||
ಎತ್ತ ನೋಡಿದರೂ ಕಳ್ಳಕಾಕರು, ಸುತ್ತ ಹುಡುಕಿದರೂ ಪುಂಡಪೋಕರು
ಕಿತ್ತು ತಿನ್ನುತಿಹರು ರಣಹದ್ದಿನಂತೆ ಶಾಂತಿ ಎಲ್ಲಿದೇ ದೇವಾ|
ಎಂದಿಗೇ ನಲಿವು ಸಿಗುವುದೋ,ಯಾವಾಗ ಮುಕ್ಕಣ್ಣ ತೆರೆವನೋ||
ಜಗಪತಿ ನೀನು,ಮೂಜಗಪತಿ ನೀನು
ಶಾಂತಿಸುಖದ ಸೆಲೆಯೂ ನೀನು|
ಎಂದಿಗೆ ನಿನ್ನ ದರ್ಶನ,ನಿನಗಿದೂ ನನ್ನ ಶಿರಸಾನಮನ||
ಮನಸಲ್ಲಿ ನೀನು ನೆಲೆಸು ಬೇಗ
ಕಳೆಯೋ ನಮ್ಮ ಮೌಢ್ಯಾತ್ಮಸಾರ

ನಮಿಸುವೆ ನಿನಗೆ ಹೇ ದಯಾಮಯ,ದಯೆತೋರೋ ಪರಮೇಶ್ವರ||

ಸೋಮವಾರ, ಆಗಸ್ಟ್ 18, 2014

raagiya mahime thiliyadavaraaro

ರಾಗಿಯ ಮಹಿಮೆ ತಿಳಿಯದವರಾರೋ

ರಾಗಿಯ ಮಹಿಮೆ ತಿಳಿಯದವರಾರೋ
ಆನಂದಿಸದೇ| ಬಿಡುವವರಾರೋ||
ಹುಟ್ಟಿಗು ಸಾವಿಗು ಅಂತರದಲ್ಲಿ| ರಾಗಿಯು ನಮ್ಮನು ಸಲಹುವುದು|
ಬಗೆ ಬಗೆ ಖಾದ್ಯಕೂ| ಬಗೆ ಬಗೆ ದಿನಸಿಗೂ ಸವಾಲೆಸೆದಿಹುದು ಈ ರಾಗಿ||
ಬಡವ ಬಲ್ಲಿದ| ಭೇದವ ತೋರದೆ|
ಎಲ್ಲರ ಬಯಕೆಯು|ಹಿಂಗಿಸಿದೆ||
ಎಲ್ಲಾ ಜನರ| ಪ್ರೀತಿಯ ದವಸವು|
ಮೆರೆದಿದೆ ಚಂದದಿ| ನೀ ರಾಗಿ||
ಜಾತಿ ಭೇದವ ವಿರಸವ್ ತೋರದೆ| ಸರಸದಿ ನೀ ಬೇಕಾದೆ|
ದೇಹಕೆ ಅಂದವು|ಮನಕಾನಂದವು|
ಸುಣ್ಣದ ಗುಣವು|ಹೊಂದಿಹುದು|
ರೋಗ ನಿರೋಧಕ|ಶಕ್ತಿಯ ಹೊಂದಿ|
ಜನತೆಗೆ ಸಧೃಢ| ಮಾಡಿಹುದು||
ಔಷಧಿ ನೀಡುವ ವೈಧ್ಯರಿಗೆ| ನೀನೇ ಸಾರ್ವಭೌಮನು|
ಬಗೆ ಬಗೆ ತಿಂಡಿಯ| ರೂಪದಿ ನೆಲೆಸಿಹೆ|
ರಾಜ ಮಹಾರಾಜರ ಶೌರ್ಯಕೆ ಬೇಕಿಹೆ ನೀ ರಾಗಿ||

raagi laavani

ಲಾವಣಿ ರಾಗಿ

ಲಾಲಿಸಿ ಕೇಳೋ ಕೃಷಿಕನೆ ನೀನು
ರಾಗಿ ಬೆಳೆಯ ಚರಿತೆಯನು|
ಹುಟ್ಟಿದ ಮೇಲೆ ರಾಗಿಯ ತಿನ್ನದೆ ಸತ್ತರೆ
ಘೋರ ನರಕವದು ತಿಳಿಯಣ್ಣ||
ಚೇಳಿಗೆ,ಹಾವಿಗೆ ವಿಷವೇ ಅಮೃತವಣ್ಣ
ರಾಗಿಯು ನಮಗೆ ಸಂಜೀವಿನಿಯಂತೆ ತಿಳಿಯಣ್ಣ||
ರಾಗಿಯ ತಿಂದರೆ ದೇಹವು ಸದೃಢ ನೋಡಣ್ಣ
ಉಡುಪದು ಬೇಕು ದೇಹಕೆ ಶೋಭೆ ತಿಳಿಯಣ್ಣ||
ಕಾಲಿನ ರಕ್ಷ್ಣೆ ಮೆಟ್ಟಿನಿಂದ ತಿಳಿಯಣ್ಣ
ರೆಟ್ಟೆಗೆ ಶಕ್ತಿ,ತೋಳಿಗೆ ಶಕ್ತಿಗೆ ಬೇಕಿದೆ ರಾಗಿ ತಿಳಿಯಣ್ಣ||
ಹಣತೆಯ ಬೆಳಕು ಮನೆಗದು ಕಾಂತಿ ಅಲ್ವೇನಣ್ಣಾ
ರಾಗಿಯ ತಿಂದರೆ ಮನಕದು ಕಾಂತಿ,ದೇಹಕೆ ಶಾಂತಿ ತಿಳಿಯಣ್ಣಾ||
ಮಕ್ಕಳ ಶಕ್ತಿಗೆ ತಾಯಿಯ ಹಾಲು,ಗೋವಿನ ಹಾಲು ಬೇಕಣ್ಣ
ನಮ್ಮಯ ಶಕ್ತಿಗೆ ರಾಗಿಮುದ್ದೆ,ಸೊಪ್ಪಿನ ಬಸ್ಸಾರ್ ಬೇಕಣ್ಣಾ||
ಕಲ್ಲು ಚಂದದ ಶಿಲೆಯಾಗಲು ಶಿಲ್ಪಿಯ ಏಟದು ಬೇಕಣ್ಣ
ಕಲ್ಲುಗುಂಡಿಗೆ,ಕಭ್ಭಿಣ ತೋಳು,ಗರಗಸ ಮಾತು ಹೊರಡಲು ರಾಗಿಮುದ್ದೆ ತಿನ್ನಬೇಕಣ್ಣಾ||
ಕನ್ನಡಿ ಮುಂದೆ ನಿಂತರೆ ನೀನು ನರಪೇತಲನಂತೆ ಕಾಣುವೆ ಏಕಣ್ಣ
ಬಿಸ್ಕತ್,ಚಾಕ್ ಲೇಟ್, ತಿನ್ನುತ ರಾಗಿಯ ಮರೆತುದೆ ಕಾರಣ ತಿಳಿಯಣ್ಣಾ||
ಕನ್ನಡ ಕಣ್ಮಣಿ ಡಾ.ರಾಜ್ ಯಾರಿಗೆ ತಿಳಿಯದು ಹೇಳ್ರಣ್ಣಾ
ಅವರ ಮುದ್ದಿನ ಆಹಾರ ರಾಗಿಮುದ್ದೆ,ಬಸ್ಸಾರ್ ಕೇಳ್ರಣ್ಣಾ||
ಮಾಜಿ ಪ್ರಧಾನಿ ದೇವೇಗೌಡ್ರು ಯಾರಿಗೆ ತಿಳಿಯರು ಹೇಳ್ರಣ್ಣಾ
ಅವರ ಮುದ್ದಿನ ಆಹಾರ ಈ ರಾಗಿಮುದ್ದೆ ತಿಳಿಯಣ್ಣಾ||
ಆ ಗಟ್ಟಿಗಿತ್ತಿ ಒನಕೆ ಓಬವ್ವ ಗೊತ್ತಲ್ಲ
ಹಿಟ್ಟನು ತಿಂದು ಜಟ್ಟಿಯಂತೆ ಆ ಯವನರ ಕೊಂದ ದಿಟ್ಟೆಯಣ್ಣಾ||
ರಾಗಿಯ ಬಗ್ಗೆ ಎಷ್ಟು ಬರೆದರೂ ಸಾಲದಣ್ಣಾ
ಸೇವೆಯ ಮಾಡುವ ಮನ್ಸಿದ್ದರೆ ನಿನಗೆ ಈ ರಾಗಿಯ ತಿಂದು
ಈ ದೇಶದ ಆಸ್ತಿಯಾಗಣ್ಣಾ||

raagiye ninna vaishistyavenu

ರಾಗಿಯೇ ನಿನ್ನ ವೈಶಿಷ್ಟ್ಯವೇನು?

ರಾಗಿಯೇ ನಿನ್ನ ವೈಶಿಷ್ಟ್ಯವೇನು?
ವರ್ಣಿಸಿ ಹೇಳಲು ಅಸದಳವು||
ಹೊಲದಲಿ ಬೆಳೆವ ಕೃಷಿಕನ ಸಿಂಧು
ನಿನ್ನ ಪೌಷ್ಠಿಕ ಗರಿಮೆ ಮೆರೆಯುತಿಹೆ||
ಹಲವು ವಿಧದಲಿ ಹಲವು ಬಗೆಯಲಿ
ನಿನ್ನ ಹಿರಿಮೆಯು ಸಾಗುತಿದೆ||
ಬಗೆ ಬಗೆ ತಳಿಯ ಮುತ್ತಿನ ತೆರದಿ
ಸಾಸಿವೆ ಅಂದದಿ ಕಾಣಿಸುವೆ||
ರೈತರ ನಿಧಿನೀ,ರೈತರ ಸಿರಿ ನೀ,
ಕಡಿಮೆ ಮಳೆಗೂ ನೀ ಬೆಳೆಯುತಿಹೆ||
ಕೃಷಿಕರ ಪ್ರೀತಿಯ ಬೆಳೆಯಾಗಿರುವೆ
ಸದೃಢಶಕ್ತಿಗೆ ನೀ ಬೇಕಾಗಿರುವೆ||
ಸಕ್ಕರೆ,ಜಾಂಡೀಸ್ ಗಳ ದೂಡಲು
ಓ ರಾಗಿಯೇ ನೀ ಬೇಕಾಗಿರುವೆ||
ರೈತರ ನಿಧಿಯೇ ಈ ರಾಗಿ
ವೈಧ್ಯರ ಮೆಚ್ಚಿನ ಈ ರಾಗಿ
ಶೇಕಡ ನೂರು ಆರೋಗ್ಯಕೆ
ರಾಗಿಯಮುದ್ದೆಯದು ಬೇಕಿಹುದು||

bhittidare raagi thali bhittabeku

ಭಿತ್ತಿದರೇ ರಾಗಿ ತಳಿ ಭಿತ್ತಬೇಕು

ಭಿತ್ತಿದರೇ ರಾಗಿ ತಳಿ ಭಿತ್ತಬೇಕು
ಉತ್ತಿದರೇ ಕನ್ನಡ ಮಣ್ಣ ಉತ್ತಬೇಕು
ಕೃಷಿಕನ ಬದುಕು ಜೂಜು
ಇದು ಅರಿತೂ ಸಾಗಿದರೆ ಮೋಜು
ಕೃಷಿಕನ ಬದುಕು ಜೂಜು
ಅರಿತೂ ಸಾಗಿದರೆ ಮೋಜು||
ಕಾವೇರಿ ಹೊಳೆಯಾ ನೋಡು...
ಕಪಿಲೆಯ ನೀರಾ ನೋಡು...
ತುಂಗೆಯ ಚೆಲುವಾ ನೋಡು
ಹೇಮಾಳ ಸೊಬಗೂ ನೋಡಿ
ಹೆಮ್ಮೇಲಿ ನೀ ಹಾಡು||
ಕೋಟಿಲಿಂಗನ ಎಣಿಸೋರು ಯಾರು?
ಮೇಲ್ಕೋಟೆ ಚೆಲುವಾನಾ ಬಣ್ಣಿಸೋರು ಯಾರು?
ಕೈವಾರ ತಾತನೋರ ಬಯ್ಯೋರು ಯಾರು?
ಅಂಗೇಯಾ ಈ ರಾಗೀನ ಎಣಿಸೋದು ಬ್ಯಾಡಾ!
ನೂರೆಂಟು ಯೋಚ್ನೆ ಬ್ಯಾಡಾ,
ಮಳೆ ಗಿಳೆ ಕಡಿಮೆ ಆದ್ರೂ
ರಾಗೀನ ನಂಬಿದ್ರೇ
ಆ ರಾಘವೇಂದ್ರ ಕಾಪಾಡ್ವ
ಆ ರಾಘವೇಂದ್ರ ಕಾಪಾಡ್ವ||
ಊರೂರು ಸುತ್ತುವೆ ಏಕೆ?
ಪಡಬಾರ್ದ ಪಾಡು ಪಡುವೆ
ಏನೆಲ್ಲ ಸಂಕಟ ಸಾಕು, ಈ ರಾಗೀನ ಭಿತ್ತಿದ್ರೆ
ಆ ವೆಂಕಟನೇ ಕಾಪಾಡ್ವ||

jai kannada krushikara sanjaathe

ಜೈ ಕನ್ನಡ ಕೃಷಿಕರ ಸಂಜಾತೆ

ಜೈ ಕನ್ನಡ ಕೃಷಿಕರ ಸಂಜಾತೆ
ಓ ಹೈಬ್ರೀಡ್ ರಾಗಿಗೆ ನಮಸ್ಕಾರ||
ಜೈ ನಿನ್ನಯ ಪೌಷ್ಠಿಕ ಗುಣಗಾತೆ
ಜಯಹೇ ನೀಡುವೆ ಇಳುವರಿ ಗರಿಷ್ಠತೆ
ಕೃಷಿಕರ ತಣಿಸುವ ಮಣಿಮಂಜರಿ ನೀ
ಕೆಂಪನೆ,ದುಂಡನೆ ಗುಣಮಣಿ ನೀ
ಶ್ರೀ ರಂಗನ,ಸಿದ್ದಲಿಂಗನ ತವರೂರಿನ ನಿಧಿ ನೀ||ಜೈ||
ಭೂದೇವಿಯ  ಮಡಿಲಿನ ಹೆಮ್ಮೆಯು ನೀ
ಕೃಷಿಕರ ಜೀವವೆ ನಿನ್ನಯ ಹಿರಿಮೆ
ಹಸಿರಿನ ಪೈರಿನ ಸರತಿಯ ಸಾಲೇ......
ಭೂದೇವಿಗೆ ನೀ ತೊಡಿಸಿದ ಮುತ್ತಿನ ಮಾಲೇ....
ಇಂಡಾಫ್,ಎಂಆರ್‍,ಜಿಪಿಯು,ಸಂತತಿ
ಸಂಶೋಧಿತ ಸಾಲೇ||
ತಮಿಳರು,ತೆಲುಗರು,ಮರಾಠರು,ಕೇರಳಿ,ಬಂಗಾಳಿ
ಒಡೀಸ್ಸರು,ಸಿಕ್ಕರು,ಬೌದ್ದರು,ಜೈನರು,ಸಾಹೇಬರೂ,
ಪಾದ್ರಿ,ಪಠಾಣ್ ಇವರೆಲ್ಲರ ಮಿಗಿಲು
 ಹಿಂದೂಕುಲ ಸಂಜಾತೇ
ಕನ್ನಡ ಕೃಷಿಕರ ಹೆಮ್ಮೆಯ
ಧಾತೇ||ಜೈ||

kannadada raitharella ondagi keli

ಕನ್ನಡದಾ ರೈತರೆಲ್ಲಾ ಒಂದಾಗಿ ಕೇಳಿ

ಕನ್ನಡದಾ ರೈತರೆಲ್ಲಾ ಒಂದಾಗಿ ಕೇಳಿ
ರಾಗಿತಳಿಯ ಬೆಳೆಸಲು ಅಲ್ಪ ಮಳೆಯೆ ಸಾಕು||
ಕೃಷಿತನವೇ ದೇಶದ ಬುನಾದಿ ಮರೆಯಬೇಡಿ
ಮೌಢ್ಯಮೂಲನಂಬಿಕೆಗಳ ದಾಸರಾಗಬೇಡಿ||
ಅಂದು ಜನರು ದೃಢಕಾಯರಾಗಲು ರಾಗಿಬೆಳೆಯೆ ಕಾರಣ
ಅಂದು ಜನರು ಸದೃಢರಾಗಲು ರಾಗಿಮುದ್ದೆ ಕಾರಣ||
ಕೀಳು ಮಾತನಾಡುವವರ ಕಣ್ತೆರೆಯಿರೆನ್ನಿ
ಕೀಳು ಮಾತನಾಡುವವರ ಬಾಯ್ಮುಚ್ಚಿ ಬನ್ನಿ||
ರಾಗಿ ಬೆಳೆಸಿರೆಲ್ಲರು ಅದು ನಾಡಿಗೇ ಹಿತಕರ
ತಕರಾರು,ತಗಾದೆ,ಒಳಜಗಳ ತಗ್ಗಲು
 ಯುವಶಕ್ತಿಯೆ ಬೇಕಿದೆ
ಯುವಶಕ್ತಿಯ ಬೆನ್ನೆಲುಬಿಗೆ ರಾಗಿಮುದ್ದೆ ಅವಶ್ಯವು||
ಕೋಲಾರ,ಚಿಕ್ಕಬಳ್ಳಾಪುರ,ಮೈಸೂರು,ಬೆಂಗಳೂರು
ತುಮಕೂರು ಜಿಲ್ಲೆಗಳೆ ರಾಗಿ ಸಾಂದ್ರತೆ
ಕುರುಕ್ಷೇತ್ರ ಸೂತ್ರನು ಶ್ರೀ ಕೃಷ್ಣನ ಬಣ್ಣವು
ಸಂಗೀತದ ನಾದನು ಕೋಗಿಲೆಯ ಬಣ್ಣವು
ಯಾರಿಗಿಲ್ಲ ಹಿತಕರ ?
ಮತ್ತದೋ ಬರುತಿದೇ ಪ್ರಪಂಚ ಮಹಾಯುದ್ಧವು
ಪ್ರಚಂಢಶಕ್ತಿ ನಮ್ಮಲಿದ್ದರೆ ವೈರಿ ದೂರಓಡುವಾ
ಜನಮಾನ್ಯರಾಗಲು,ವಿಶ್ವಮಾನ್ಯರಾಗಲು,
ರಾಗಿ ಬೆಳೆಸಿರೆಲ್ಲರೂ,ರಾಗಿ ಬೆಳೆಸಿರೆಲ್ಲರೂ||

karu nada taayi raagi thali

ಕರು ನಾಡ ತಾಯಿ......ರಾಗಿ ತಳಿ

ಕರು ನಾಡ ತಾಯಿ......ರಾಗಿ ತಳಿ
ಈ ಸಸ್ಯವು......ನಮ್ಮ ಸಂಜೀವಿನಿ
ಹೃದಯಕೆ ತಂಪು ಇದು....ಮನಕೆ ಶಾಂತಿ ಇದು...||
ವೀರ ಶೂರರಾಗಲು...ರಾಗಿ ತಿನ್ನಿರೆಲ್ಲರು
ಶಾಂತಿದೂತರೆನಿಸಲು...ರಾಗಿ ತಿನ್ನಿರೆಲ್ಲರು
ವರನಟನು ಸಾರ್ವಭೌಮನಾಗಲು ರಾಗಿ ತಿಂದದ್ದು
ಆ ದೇವೇಗೌಡರು ಪ್ರದಾನಿಯಾಗಲು ರಾಗಿ ಕಾರಣ
ಸಾಮರ್ಥ್ಯವಿದ್ದಲ್ಲಿ ಸಾಮ್ರಾಜ್ಯವು||
ಜೀವ ಸಂಜೀವಿಯಾಗಲು.... ರಾಗಿ ತಿನ್ನು ನೀ
ಎಲ್ಲಾ ಆಂಜನೇಯರಾಗಲು....ರಾಗಿ ತಿನ್ನು ನೀ
ಸೌಂದರ್ಯ,ಸದೃಢತೆಗೆ ..ರಾಗಿ ಅವಶ್ಯವು
ಆಂತರ್ಯ,ಧಾರ್ಢ್ಯತೆಗೆ..ರಾಗಿ ಅವಶ್ಯವು
ಕರಿಮೆಟ್ಟಿಸೆಣೆಸಿದ ರಾಗಿನಾಡು ನಮ್ಮದು||
ರವಿಯೇ ಬರಲಿ ಆ ಚಂದ್ರನೇ ಬರಲಿ
ಕಡೆಗೇ ಆ ಇಂದ್ರನೆ ಬಂದರೂ
ನಾ ಕೇಳುವೆ ವರವಾ.....
ರಾಗಿ ಬೆಳೆವ ನಾಡದು ಬೇಕು..
ರಾಗಿ ಬೆಳೆವ ಕೃಷಿಕ ನಾನಾಗಬೇಕು||

kolara sindhu raagi thali

ಕೋಲಾರ ಸಿಂಧು ರಾಗೀ ತಳಿ

ಕನ್ನಡದ ಕೃಷಿಬಂಧು ರಾಗೀ ತಳಿ
ಕೋಲಾರ ಸಿಂಧು ರಾಗೀ ತಳಿ||
ನೀನೊಬ್ಬನೇ ಕೃಷಿಯ ಸಿಂಧೂರ ತಿಲಕ
ಈ ನಾಡ ಕೃಷಿಕರಿಗೆ ವರಧಾನ ರಾಜೇಂದ್ರ
ಕರು ನಾಡ ಕೃಷಿಕರಿಗೆ ವರಧಾನ ರಾಗಿ
ಕರು ನಾಡ ಕೇಸರಿ ಜಿ.ಪಿ.ಯು 28
ಸತ್ಯಾ ತಿಳಿ, ದೇಹಪುಷ್ಠಿಯಿದು, ಸರ್ವರೋಗಕ್ಷಯ
ಸಕಲರ ಸಂಜೀವಿನಿ.....
ಕಲಿಯುಗದ..ಕೃಷಿಕರಿಗೆ ಶ್ರೀಮನ್ನಾರಾಯಣ||
ಹಳ್ಳಿಯಲ್ಲಿ ಮೃಷ್ಠಾನ್ನ ರಾಗಿಮುದ್ದೆ
ದಕ್ಷಿಣದ ಮುದ್ದೆ ತಿಂದ ದೇವೇಗೌಡರು
ನಮ್ಮ ದೇಶದ ಪ್ರದಾನಿಯಾಗಿದ್ದು ನಿಜತಾನೆ
ಸಕಲರಿಗೂ ಸನ್ಮಂಗಳವು ಈ ರಾಗಿ||
ಕಲ್ಲುಗಳ ಪುಡಿಮಾಡೆ ರಾಗಿಮುದ್ದೆ ತಿನ್ನು
ವೈರಿಗಳ ಸದೆಬಡಿಯೇ ರಾಗಿಮುದ್ದೆ ತಿನ್ನು
ವಾತ್ಸಲ್ಯ,ಸುಖ-ಶಾಂತಿಗೆ ರಾಗಿ ತಿನ್ನು
ಸಕಲರ ಆರೋಗ್ಯಕೆ ವೈದ್ಯರು ನೀಡುವ
ಸಲಹೇ ರಾಗಿತಿನ್ನು||