ಹಿಮಾಲಯ ಹತ್ತಿದೆ himaalaya hattide
ದೇವಾಲಯ ಸುತ್ತಿದೆ deevaalaya suttide
ಮನುಜಾ ನೀ ಬದಲಾಗಲಿಲ್ಲ manuja nee badalaagalilla
ಬಿದಿರಾಶ್ರಯ ಪಡೆದೆ ನೋವೆಲ್ಲಾ ನು೦ಗಿದೆ bidiraashraya padede noovellaa nungide
ಹುಳುವೇ ನೀ ಎಲ್ಲರಿಗೂ ವಸ್ತ್ರವಾದೆ:: huluvee nee ellarigu vastravaade!
ರೇಷ್ಮೆ ಸೀರೆಯು ನೋಡಲು,ಉಡಲು ಬಲು ಸೊಗಸು reeshme seereyu noodalu, udalu balu sogasu
ರೇಷ್ಮೆಹುಳುವು ನೂಲ ತೆಗೆಯಲು ಬಾಳೆ ಸವೆಸಿತು reshme huluvu nuula tegeyalu baalee savesitu
ಹಿಟ್ಟು ಸೊಪ್ಪು ತಿ೦ದಿತು ದೇಹ, ಬಾಳು ಪೂರೈಸಿ ಮಣ್ಣು ಗೂಡಿತು hittu soppu tinditu deeha, baalu puuraisi mannu guuditu
ಬರೀ ಸೊಪ್ಪು ತಿ೦ದಿತು ಹುಳುವು, ಬಾಳು ಪೂರೈಸಿ ನೂಲ ನೀಡಿತು bari soppu tinditu huluvu, baalu puraisi nuula needitu
ಯಾರಿಗೂ ನೆರಳಾಗಲಿಲ್ಲ ಮನುಜಾ ನೀ ನೇತಕೇ ಅರ್ಹ yaarigu neralaagalilla manujaa nee neetake arha
ಎಲ್ಲರಿಗೂ ವಸ್ತ್ರ ನೀಡಿ ಸಾರ್ಥಕ್ಯ ಪಡೆದ ಹುಳುವೇ ನೀ ಧನ್ಯ:: ellarigu vastra needi saarthakya padeda huluve nee dhanya
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ